ಇಂಡಿಯನ್ ಟೂರಿಸಂ ಡೆವಲಪ್‍ಮೆಂಟ್ ಕಾರ್ಪೋರೇಷನ್
1966ರಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಸ್ಥಾಪಿತವಾದ ಸರ್ಕಾರಿ ವಲಯಸಂಸ್ಥೆ. ಭಾರತದಲ್ಲಿ ಪ್ರವಾಸೋದ್ಯಮ ಬೆಳೆಸುವುದು ಇದರ ಮೂಲೋದ್ದೇಶ. ಭೋಜನ, ವಸತಿಗೃಹಗಳ ನಿರ್ಮಾಣ, ಪ್ರವಾಸಿ ಮಂದಿರ ಹಾಗೂ ಉಪಾಹಾರ ಗೃಹಗಳ ನಿರ್ವಹಣೆ, ಪ್ರವಾಸಿಗಳಿಗೆ ಸಾರಿಗೆ ಸೌಲಭ್ಯ ನೀಡಿಕೆ. ಪ್ರವಾಸ ಸಂಬಂಧವಾದ ಜಾಹಿರಾತು, ಕರಪತ್ರ, ಕೈಪಿಡಿಗಳ ಪ್ರಕಟನೆ, ಪ್ರವಾಸಿಗಳ ಮನೋರಂಜನೆಯ ಕಾರ್ಯಕ್ರಮಗಳ ಏರ್ಪಾಡು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ರೇವುಪಟ್ಟಣಗಳಲ್ಲೂ ಸುಂಕರಹಿತ ಅಂಗಡಿಗಳ ಸ್ಥಾಪನೆ-ಇವು ಈ ಸಂಸ್ಥೆಯ ಕಾರ್ಯಭಾರ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ